2025 ಹೊಸ ಯೂನಿಯನ್ ಬಜೆಟ್ ನಂತರ ಬ್ಯಾಂಕ್ ಗಳ FD ಹೂಡಿಕೆ ಹೆಚ್ಚಾಗಿದೆ

ಇತ್ತೀಚೆಗೆ 2025 ಫೆಬ್ರವರಿ 1 ರಂದು ಘೋಷಿಸಿದ ಹೊಸ ಯೂನಿಯನ್ ಬಜೆಟ್ ನಂತರ ಅನೇಕ ಕ್ಷೇತ್ರಗಳಲ್ಲಿ ಬಹಳಷ್ಟು ಬೆಳವಣಿಗೆ ಕಂಡು ಬಂದಿದೆ.

ಈ ಬೆಳವಣಿಗೆಗೆ ಮುಖ್ಯವಾದ ಕಾರಣ ಫೈನಾನ್ಸಿಯಲ್ ಮಿನಿಸ್ಟರ್ ನಿರ್ಮಲ ಸೀತಾರಾಮನ್ ಪ್ರಕಟಿಸಿದ ಕೆಲವು ಮುಖ್ಯವಾದ ಪ್ರಯೋಜನಗಳು, ಆ ಪ್ರಯೋಜನಗಳು ಯಾವುವು ಎಂದು ಕೆಳಗೆ ತಿಳಿಯಿರಿ.

  • ಮಧ್ಯವರ್ಗದ ಜನರಿಗೆ ದೊಡ್ಡ ಮಟ್ಟದ ಟ್ಯಾಕ್ಸ್ ರಿಲೀಫ್ ಬರೋಬ್ಬರಿ 12 ಲಕ್ಷವರೆಗೂ ಯಾವುದೇ ಕಂದಾಯ ಕಟ್ಟುವಂತಿಲ್ಲ.
  • ತಿಂಗಳಿಗೆ ಒಂದು ಲಕ್ಷ ಸಂಬಳ ಪಡೆಯುವ ಸಿಬ್ಬಂದಿಗಳು ಟ್ಯಾಕ್ಸ್ Rebate ಪಡೆದುಕೊಳ್ಳಬಹುದು.
  • 12 ಲಕ್ಷವರೆಗೂ ಟ್ಯಾಕ್ಸ್ ಫ್ರೀ, ಅಲ್ಲದೆ ವ್ಯಾಪಾರಸ್ಥರು ಮತ್ತು ನೌಕರರು ಕೆಲವು Deductions ಹಾಗೂ Exemptions ಕೂಡ ಪಡೆಯ ಬಹುದು.
  • ಮುಂದಿನ ದಿನಗಳಲ್ಲಿ ಬ್ಯಾಂಕ್ ಲೋನ್ ಬಡ್ಡಿ ದರ ಇಳಿಕೆ ಆಗುವ ಸಾಧ್ಯತೆ.

ಹಿಂದಿನ ಬಜೆಟಿನಲ್ಲಿ ನಿರ್ಮಲ ಸೀತಾರಾಮನ್ 7 ಲಕ್ಷವರೆಗೂ ಟ್ಯಾಕ್ಸ್ ಫ್ರೀ ಎಂದು ಘೋಷಿಸಿದರು ಕೆಲವರಿಗೆ ಅನುಕೂಲವಾದರೂ ಬಹುಮತ ಜನರಿಗೆ ಮುಖ್ಯವಾಗಿ ಬಹಳ ವ್ಯಾಪಾರಸ್ಥರಿಗೆ ಅನುಕೂಲವಾಗಲಿಲ್ಲ ಎಂದು ಪ್ರಕಟಿಸಿದರು.

ಆದರೆ ಇದೀಗ ಬಂದ ಹೊಸ ಬಜೆಟಿನಲ್ಲಿ ನಿರ್ಮಲ ಸೀತಾರಾಮನ್ ರವರು 7 ಲಕ್ಷದಿಂದ 12 ಲಕ್ಷವರೆಗೂ ಏರಿಕೆ ಮಾಡಿದ್ದಾರೆ. ಇದು ಬಹುಮತ ಜನರಿಗೆ ಅನುಕೂಲವಾಗಿದೆ ಒಂದು ರೀತಿಯಲ್ಲಿ ಮಧ್ಯವರ್ಗದ ಜನರಿಗೆ ದೊಡ್ಡ ರಿಲೀಫ್ ಸಿಕ್ಕಿದೆ ಎಂದು ಜನರು ಘೋಷಿಸಿದ್ದಾರೆ.

ಈ ದೊಡ್ಡ ರಿಲೀಫ್ ನೌಕರಿಗೆ ಮಾತ್ರವಲ್ಲ ಬಹು ಮುಖ್ಯವಾಗಿ ವ್ಯಾಪಾರಸ್ಥರಿಗೆ ಬಹಳ ಅನುಕೂಲವಾಗಿದೆ ಏಕೆಂದರೆ ಸಣ್ಣ ಹಾಗೂ ಮದ್ಯವರ್ಗದ ವ್ಯಾಪಾರಸ್ಥರು ಹೆಚ್ಚು ಉಳಿತಾಯ ಮಾಡಬಹುದು. ಬರಿ ವ್ಯಾಪಾರಸ್ಥರು ಮಾತ್ರವಲ್ಲ ಬಹಳ ನೌಕರರು, ಕೆಲಸಗಾರರು ಕೂಡ ತಮ್ಮ ತಮ್ಮ ಸಂಬಳದಿಂದ ಉಳಿತಾಯ ಮಾಡಬಹುದು.

2025 ಹೊಸ ಯೂನಿಯನ್ ಬಜೆಟ್ ನಂತರ ಬ್ಯಾಂಕ್ ಗಳ FD ಹೂಡಿಕೆ ಹೆಚ್ಚಾಗಲು ಕಾರಣವೇನು?

ಈಗಾಗಲೇ ಮೇಲೆ ವಿವರಿಸಿದ ಹಾಗೆ ಬ್ಯಾಂಕ್ ಗಳ FD ಹೂಡಿಕೆ ಹೆಚ್ಚಾಗಲು ಒಂದು ಬಹು ಮುಖ್ಯವಾದ ಕಾರಣ ಉಳಿತಾಯ.

12 ಲಕ್ಷ ವರೆಗು ಟ್ಯಾಕ್ಸ್ ರಿಲೀಫ್ ಸಿಕ್ಕ ಕಾರಣ ಜನರು ತಮ್ಮ ಆದಾಯದಿಂದ ಉಳಿತಾಯವನ್ನು ಮಾಡಲು ಪ್ರಾರಂಭ ತೊಡಗಿದರು. ಮಾಡಿದ ಉಳಿತಾಯವನ್ನು ಇನ್ನು ಹೆಚ್ಚಿಸಲು ಅಥವಾ ಹೆಚ್ಚುವರಿ ಆದಾಯವನ್ನು ಗಳಿಸಲು ಬ್ಯಾಂಕ್ FD ಗಳಲ್ಲಿ ಹೂಡಿಕೆ ಮಾಡಲು ಜನರು ಮುಂದ್ ಬಂದಿದ್ದಾರೆ.

ಈ ಮೇಲ್ಪಟ್ಟ ಕಾರಣದಿಂದ ಬ್ಯಾಂಕ್ ಗಳಲ್ಲಿ FD ಹೂಡಿಕೆದಾರರು ಹೆಚ್ಚಾಗಿದ್ದಾರೆ. ಇದನ್ನು ಗಮನಿಸಿದ ಬ್ಯಾಂಕ್ ಗಳು ಕೂಡ FD ಬಡ್ಡಿ ರೇಟ್ ಸಹ ಹೆಚ್ಚಿಸಿದ್ದಾರೆ. FD ಬಡ್ಡಿ ದರ ಏರಿಕೆಯನ್ನು ಎಲ್ಲಾ ಬ್ಯಾಂಕ್ ಗಳಲ್ಲಿ ನೋಡಲು ಸಾಧ್ಯವಿಲ್ಲ, ಕೆಲವು ಬ್ಯಾಂಕ್ ಗಳಲ್ಲಿ ಮಾತ್ರ ಈ ಬದಲಾವಣೆಗಳನ್ನು ನೋಡಬಹುದು.

ಇಲ್ಲಿದೆ ಸಂಪೂರ್ಣ ಮಾಹಿತಿ 2025 ಯಾವ ಯಾವ ಪ್ರಮುಖ ಬ್ಯಾಂಕ್ ನಲ್ಲಿ FD ಬಡ್ಡಿ ದರ ಹೆಚ್ಚಾಗಿದೆ:
ಬ್ಯಾಂಕ್ ಹೆಸರುಬಡ್ಡಿ ದರ
IDFC First Bank 7.90%
IndusInd Bank7.99%
Yes bank8.0%
RBL Bank8.0%
Bandhan Bank8.05%

ನೀವೇನಾದರೂ ಸೀನಿಯರ್ ಸಿಟಿಜನ್ ಅಥವಾ ಹಿರಿಯ ನಾಗರೀಕರದಲ್ಲಿ ನಿಮಗೆ ಈ ಮೇಲ್ಪಟ್ಟ ಬ್ಯಾಂಕ್ ಗಳು ಇನ್ನು ಹೆಚ್ಚು ಬಡ್ಡಿ ದರ ಕೊಡುತ್ತಾರೆ ನಿಮ್ಮ ಹೂಡಿಕೆಗೆ. ಹೆಚ್ಚಿನ ಮಾಹಿತಿಗಾಗಿ ನಿರ್ದಿಷ್ಟ ಬ್ಯಾಂಕ್ ಗಳಿಗೆ ಭೇಟಿ ನೀಡಿ ಅಥವಾ ಬ್ಯಾಂಕ್ ಗಳ ವೆಬ್ಸೈಟ್ ನಲ್ಲಿ ಪರಿಶೀಲಿಸಿ.

ಕೆಲವು ಪ್ರಮುಖ SBI, Canara, Union ಸರ್ಕಾರಿ ಬ್ಯಾಂಕ್ ಗಳಲ್ಲಿ ಹಿಂದಿನ ವರ್ಷಗಿಂತಲೂ 2025 ಬ್ಯಾಂಕ್ ಗಳ ಬಡ್ಡಿ ದರ ಇಳಿಕೆಯಾಗಿವೆ. ಆದರೆ ಪ್ರಮುಖ ಪ್ರೈವೇಟ್ ಬ್ಯಾಂಕ್ ಗಳಲ್ಲಿ ಹೆಚ್ಚು ಬಡ್ಡಿದರವನ್ನು ಕಾಣಬಹುದು.

ಅನೇಕ ಹೂಡಿಕೆ ಯೋಜನೆಗಳಿದ್ದರೂ ಜನರು FD ಯನ್ನು ಆಯ್ಕೆ ಮಾಡಲು ಕೆಲವು ಮುಖ್ಯ ಕಾರಣಗಳು ಇಲ್ಲಿವೆ:

  • FD ಫಿಕ್ಸೆಡ್ ಡೆಪಾಸಿಟ್ ಎಂಬುದು ಬಹಳ ಸುರಕ್ಷಿತ ವಾದ ಒಂದು ಯೋಜನೆ ಮತ್ತು ಇದು ಹಳೆಯ ಕಾಲದಿಂದಲೂ ಮುಂದುವರೆಸಿ ಬಂದಿದೆ.
  • ಹಿರಿಯ ನಾಗರಿಕರು ಇಷ್ಟ ಪಡುವ ಹಾಗೂ ಆಯ್ಕೆ ಮಾಡುವ ಯೋಜನೆ ಎಂದರೆ ಅದು ಫಿಕ್ಸೆಡ್ ಡೆಪಾಸಿಟ್.
  • ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿದಲ್ಲಿ ದೇಶದ ಆರ್ಥಿಕಸ್ಥಿತಿ ಸ್ವಲ್ಪ ಸಮಸ್ಯೆ ವಾದರೂ ಹೂಡಿಕೆ ದಾರರಿಗೆ ಯಾವುದೇ ಪರಿಣಾಮ ಬಿರುವುದಿಲ್ಲ.
  • ಹೂಡಿಕೆದಾರರು ವಿಭಿನ್ನ ಕಾಲಾವಧಿಯಲ್ಲಿ ಬಡ್ಡಿ ಆದಾಯವನ್ನು ಪಡೆಯಬಹುದು ಉದಾರಣೆಗೆ – ತಿಂಗಳು, ವರ್ಷ ಮದ್ಯೆ, ವರ್ಷ ಕೊನೆ ಅಥವಾ ವಿಭಿನ್ನ ವರ್ಷಕೊಮ್ಮೆ ಪಡೆಯಬಹುದು. ನಾವು ಯಾವುದೇ ಸಮಯ ಆಯ್ಕೆ ಮಾಡಿದರೂ ಸರಿಯಾದ ಸಮಯದಲ್ಲಿ ನಮ್ಮ ಬಡ್ಡಿ ಗಳಿಕೆ ಯನ್ನು ನಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಡೆಪಾಸಿಟ್ ಮಾಡುತ್ತಾರೆ.

ನೀವೇನಾದರೂ ನಿಮ್ಮ ಭವಿಷ್ಯಕ್ಕಾಗಿ ಅಥವಾ ಬೇರೆ ಏನಾದರೂ ಕಾರಣಕ್ಕಾಗಿ ನಿಮ್ಮ ಆಧಾಯದಿಂದ ಉಳಿತಾಯವನ್ನು ಬೆಳೆಸ ಬೇಕೆಂದು ಆಶಿಸಿದ್ದರೆ ಇದ್ದೊಂದು ಒಳ್ಳೆಯ ಅವಕಾಶ.

ಹಿಂದಿನ ವರ್ಷಗಳಲ್ಲಿ ಒಂದು ವೇಳೆ ನೀವೇನಾದರೂ FD ಯಲ್ಲಿ ಹೂಡಿಕೆ ಮಾಡಿದ್ದರೆ ನೀವು ಪಡೆಯುವ ಬಡ್ಡಿ ಆದಾಯಕ್ಕೆ ಹೆಚ್ಚು ಟ್ಯಾಕ್ಸ್ ಬೀಳುವ ಸಾಧ್ಯತೆ ಇತ್ತು. ಅದೇ ನೀವೇನಾದರೂ ಇನ್ನು ಮುಂದೆ FD ಹೂಡಿಕೆ ಗಳಿಂದ ಬಡ್ಡಿ ಆದಾಯವನ್ನು ಪಡೆದ್ದರೆ ನೀವು ಟ್ಯಾಕ್ಸ್ ಉಳಿತಾಯವನ್ನು ಮಾಡಬಹುದು ಏಕೆಂದರೆ 12 ಲಕ್ಷವರೆಗೂ ನಿಮಗೆ Tax Rebate ದೊರೆಯುತ್ತದೆ.

ಮುಂಚಿತವಾಗಿಯೇ ನಿಮಗೆ ವೇನಾದರೂ TDS ಕಡಿತವಾದಲ್ಲಿ ನಿಮ್ಮ ಒಟ್ಟು ಮೊತ್ತ ಆದಾಯ ಅಂದರೆ ನಿಮ್ಮ ಸಂಬಳ ಬಡ್ಡಿ ಆದಾಯ ಎಲ್ಲವು 12 ಲಕ್ಷ ಒಳಗೆ ಇದ್ದಲ್ಲಿ ನೀವು TDS Refund ಪಡೆಯಬಹುದು.

2025 ರಲ್ಲಿ ಟ್ಯಾಕ್ಸ್ ವಿಲ್ಲದೆ ಸುರಕ್ಷಿತವಾಗಿ FD ಹೂಡಿಕೆ ಮಾಡುವುದು ಹೇಗೆ?

ಈಗಾಗಲೇ ಮೇಲೆ ಹೇಳಿರುವ ಹಾಗೆ ಯೂನಿಯನ್ ಬಜೆಟ್ ಪ್ರಕಟಿಸಿರುವುದು 12 ಲಕ್ಷ ವರೆಗೂ ಮಾತ್ರ ಟ್ಯಾಕ್ಸ್ ಫ್ರೀ ಪಡೆದುಕೊಳ್ಳಬಹುದು. ಅಂದರೆ ನಮ್ಮ ಒಟ್ಟು ಮೊತ್ತ ಆದಾಯ ವರ್ಷಕ್ಕೆ 12 ಲಕ್ಷ ಗಿಂತಲೂ ಅಧಿಕ ದಾಟಿದ್ದರೆ ನಾವು ಕಚ್ಚಿತವಾಗಿ ಸರ್ಕಾರಿಗೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.

ಈಗಾಗಿ ನಾವು ಫಿಕ್ಸೆಡ್ ಡೆಪಾಸಿಟ್ ಮಾಡುವ ಸಂದರ್ಭದಲ್ಲಿ ನಮ್ಮ ಹೂಡಿಕೆಯ ಬಡ್ಡಿ ಆದಾಯ ಹೆಚ್ಚಾಗದಂತೆ ನೋಡಿಕೊಳ್ಳಬೇಕು.

ಉದಾರಣೆಗೆ ನಿಮ್ಮ ಸಂಬಳ ವರ್ಷಕ್ಕೆ 6 ಲಕ್ಷ ವಿದ್ದು ಅದರ ಜೊತೆಗೆ ನಿಮ್ಮ ಬಡ್ಡಿ ಆದಾಯವು ವರ್ಷಕ್ಕೆ 5 ಲಕ್ಷ ವಿದ್ದು ಒಟ್ಟು ಮೊತ್ತ ವರ್ಷಕ್ಕೆ ನಿಮ್ಮ ಆದಾಯ 11 ಲಕ್ಷ ವಾಗಿರುತ್ತದೆ. ಈ ಸಂದರ್ಭದಲ್ಲಿ ನಿಮಗೆ ಯಾವುದೇ ರೀತಿಯ ಟ್ಯಾಕ್ಸ್ ಅನ್ವಯಿಸುವುದಿಲ್ಲ.

ನೀವು FD ಹೂಡಿಕೆ ಮಾಡುವ ಸಂದರ್ಭದಲ್ಲಿ ನಿಮ್ಮ ಸಂಬಳ ಹಾಗೂ ನಿಮ್ಮ ಹೆಚ್ಚುವರಿ ಬಡ್ಡಿ ಆದಾಯ ಎಲ್ಲವು ವರ್ಷಕ್ಕೆ 12 ಲಕ್ಷ ಒಳಗೆ ಇರುವಂತೆ ನೋಡಿಕೊಳ್ಳಬೇಕು, ಆಗ ನಿಮಗೆ ಯಾವುದೇ ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಈ ರೀತಿ ಮಾಡುವುದರಿಂದ ಯೂನಿಯನ್ ಬಜೆಟ್ ಘೋಷಿಸಿದ ಪ್ರಯೋಜನವು ಲಾಭಕಾರಿಯಾಗುತ್ತದೆ.

Leave a Comment