Govt Plan: ಕರ್ನಾಟಕ ಸರ್ಕಾರಿ ಶಾಲೆಗಳಿಗೆ ಬರುತ್ತಿದೆ ಸ್ಮಾರ್ಟ್ ಲರ್ನಿಂಗ್

ಕರ್ನಾಟಕ Govt ಒಂದು ಹೊಸ ಯೋಚನೆಯನ್ನು ಕಾರ್ಯತಗೊಳಿಸಲು ನಿರ್ಧರಿಸಿದ್ದಾರೆ ಅದು ಏನೆಂದರೆ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಲರ್ನಿಂಗ್ education system ತರಲು ಕರ್ನಾಟಕ ಸರ್ಕಾರವು ಮುನ್ನಬಂದಿದೆ.

ಈ ಸ್ಮಾರ್ಟ್ ಲರ್ನಿಂಗ್ ಅಂದರೆ ಏನು ಇದರಿಂದ ವಿದ್ಯಾರ್ಥಿಗಳಿಗೆ ಏನು ಲಾಭ?

ಈಗಾಗಲೇ ನಮ್ಮ ಭಾರತ ದೇಶ ಡಿಜಿಟಲ್ India ಎಂದು ಹೇಳಲುತೊಡಗಿದೆ ಇದಕ್ಕೆ ಮುಖ್ಯವಾದ ಕಾರಣ ಸ್ಮಾರ್ಟ್ ಟೆಕ್ನಾಲಜಿ ಅಂದರೆ ನಾವು ದಿನ ನಿತ್ಯ ಬಳಸುವ ಫೋನ್ ಅಥವಾ ಟಿವಿ ಇತ್ಯಾದ ಎಲ್ಲಾ ಡಿಜಿಟಲ್ ವಸ್ತುಗಳು ಸ್ಮಾರ್ಟ್ ಆಗಿ ನಿಂತಿವೆ.

ಆಗಿನ ಕಾಲದಲ್ಲಿ ಪುಸ್ತಕದ ಸಹಾಯದಿಂದ ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು, ಆದರೆ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಿದೆ. ಇತ್ತೀಚೆಗೆ ಮಕ್ಕಳು ಪುಸ್ತಕ ಬದಲು ಹೆಚ್ಚು ತಮ್ಮ ತಮ್ಮ ಸ್ಮಾರ್ಟ್ ಫೋನಿನಿಂದ ವಿದ್ಯಾಭ್ಯಾಸವನ್ನು ಮಾಡಲು ಪ್ರಾರಂಭಿಸಿದ್ದಾರೆ.

ಸ್ಮಾರ್ಟ್ ಫೋನಿನಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಲಾಭವಿದೆ, ಶಾಲೆಗಳಲ್ಲಿ ಶಿಕ್ಷಕರು ಹೇಳಿ ಕೊಡುವ ಪಾಠವು ಒಂದು ವೇಳೆ ಅರ್ಥವಾಗದೇ ಹೋದರೆ ವಿದ್ಯಾರ್ಥಿಗಳು ಶಿಕ್ಷಕರ ಸಹಾಯವಿಲ್ಲದೆ ತಮ್ಮ ಮನೆಯಲ್ಲಿಯೇ ಕುಳಿತ್ತು ಸ್ಮಾರ್ಟ್ ಫೋನಿನಿಂದ ಸುಲಭವಾಗಿ ಕಲಿಯ ಬಹುದು, ಈ ತಂತ್ರಜ್ಞಾನವನ್ನು ಸ್ಮಾರ್ಟ್ ಲರ್ನಿಂಗ್ ಎಂದು ಕರೆಯುತ್ತಾರೆ.

ಒಂದು ಕಡೆ ಸ್ಮಾರ್ಟ್ ಫೋನಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸುಲಭವಾದರೆ ಇನ್ನೊಂದು ಕಡೆ ಅನೇಕ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಖರೀದಿ ಮಾಡುವುದೇ ಒಂದು ದೊಡ್ಡ ಸಮಸ್ಯೆವಾಗಿದೆ, ಏಕೆಂದರೆ ಸರ್ಕಾರಿ ಶಾಲೆಗಳಿಗೆ ಬರುವ ಅನೈಕ ವಿದ್ಯಾರ್ಥಿಗಳು ಬಡ ಕುಟುಂಬದ ಮಕ್ಕಳಾಗಿರುತ್ತಾರೆ.

ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಲರ್ನಿಂಗ್ ತರಲು ಕರ್ನಾಟಕ Government ಏಕೆ ನಿರ್ಧರಿಸಿತ್ತು?

ಈಗಾಗಲೇ ಮೇಲೆ ಹೇಳಿರುವ ಹಾಗೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಬಡ ಕುಟುಂಬದ ಮಕ್ಕಳು ಬರುವ ಕಾರಣದಿಂದ ಕರ್ನಾಟಕ ಸರ್ಕಾರವು ಸ್ಮಾರ್ಟ್ ಲರ್ನಿಂಗ್ ಎಂಬ ಈ ತಂತ್ರಜ್ಞಾನವನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ.

ಈ ಸ್ಮಾರ್ಟ್ ಲರ್ನಿಂಗ್ ಎಂಬ ತಂತ್ರಜ್ಞಾನವನ್ನು ಜಾರಿಗೊಳಿಸುವುದರಿಂದ ವಿದ್ಯಾರ್ಥಿಗಳಿಗೆ ತುಂಬ ಸುಲಭವಾಗಿ ಶಿಕ್ಷಕರು ಹೇಳಿ ಕೊಡುವ ಪಾಠವು ಅರ್ಥವಾಗುತ್ತದೆ. ಈ ಸ್ಮಾರ್ಟ್ ಲರ್ನಿಂಗ್ ತಂತ್ರಜ್ಞಾನ ಬರಿ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಲ್ಲ ಶಿಕ್ಷಕರಿಗೂ ಕೂಡ ತುಂಬ ಅನುಕೂಲವಾಗುತ್ತದೆ.

ಎಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳಿ ಕೊಡುವ ಪಾಠವನ್ನ ಅರ್ಥ ಮಾಡಿಕೊಳ್ಳಲು ತುಂಬ ಕಷ್ಟವಾಗುತ್ತದೆ, ಆ ಸಮಯದಲ್ಲಿ ಈ ಸ್ಮಾರ್ಟ್ ಲರ್ನಿಂಗ್ ಎಂಬ ತಂತ್ರಜ್ಞಾನ ಸಹಾಯದಿಂದ ಶಿಕ್ಷಕರು ಪಾಠವನ್ನು ಹೇಳಿ ಕೊಡಲು ಹಾಗೂ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದು ಬಹಳ ಬಹಳ ಸುಲಭವಾಗುತ್ತದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸ್ಮಾರ್ಟ್ ಕಲಿಕೆಯ ಕೆಲವು ಪ್ರಮುಖ ಅನುಕೂಲಗಳು ಇಲ್ಲಿವೆ:
  • ಶಿಕ್ಷಕರು ಕಲಿಸುವ ಪಾಠಗಳು ಹಾಗೂ ಪುಸ್ತಕದಲ್ಲಿರುವ ಎಲ್ಲಾ ಅಧ್ಯಾಯಗಳನ್ನು ವಿದ್ಯಾರ್ಥಿಗಳು ದೃಶ್ಯದಲ್ಲೇ ನೋಡಿ ಕಲಿಯಬಹುದು.
  • ಸ್ಮಾರ್ಟ್ ಲರ್ನಿಂಗ್ ಮೂಲಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸುವುದರಿಂದ ಶಿಕ್ಷಕರಿಗೆ ಹೆಚ್ಚು ಸಮಯವು ಉಳಿತಾಯವಾಗುತ್ತದೆ.
  • ಒಂದು ಅಧ್ಯಾಯವನ್ನು ಎಷ್ಟು ಸಲ ಬೆಕ್ಕಾದರೂ ಶ್ರಮ ವಿಲ್ಲದೆ ಸ್ಮಾರ್ಟ್ ಲರ್ನಿಂಗ್ ಸಹಾಯದಿಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳಿ ಕೊಡ ಬಹುದು.
  • ವಿದ್ಯಾಬ್ಯಸದ ಸಂಬಂಧ ಪಟ್ಟ ಪ್ರಮುಖ ಅಂಶಗಳನ್ನು ಶಿಕ್ಷಕರು ಸ್ಟೋರ್ ಮಾಡಬಹುದು ಮತ್ತು ಯಾವ ಸಂದರ್ಭದಲ್ಲೂ ಕೂಡ ಅದನ್ನು ಮತ್ತೊಮ್ಮೆ ನೋಡಬಹುದು.
  • ವಿದ್ಯಾರ್ಥಿಗಳಿಗೆ ಪುಸ್ತಕದಲ್ಲಿರುವ ಎಲ್ಲಾ ಪಾಠಗಳು ಸ್ಮಾರ್ಟ್ ಲರ್ನಿಂಗ್ ಸಹಾಯದಿಂದ ಬೇಗನೆ ಅರ್ಥವಾಗುತ್ತದೆ.
  • ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಓದುವ ಅಗತ್ಯವಿರುವುದಿಲ್ಲ ಏಕೆಂದರೆ ಶಾಲೆಯಲ್ಲೇ ಎಲ್ಲವು ಅರ್ಥವಾಗುವುದರಿಂದ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾಗುತ್ತದೆ.
  • ಈ ಸ್ಮಾರ್ಟ್ ಲರ್ನಿಂಗ್ ತಂತ್ರಜ್ಞಾನದಿಂದ ಅತ್ತಿ ಕಡಿಮೆ ಅಂಕಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಸಹ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಸಾಧ್ಯತೆ ಬಹಳ ಹೆಚ್ಚಿದೆ.
  • ಎಲ್ಲ ವಿದ್ಯಾರ್ಥಿಗಳು ಅತ್ತಿ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯತೆ ಇರುವುದರಿಂದ ಸರ್ಕಾರಿ ಶಾಲೆಗಳಿಗೆ ಬಹಳ ಗೌರವವನ್ನು ತಂದು ಕೊಡುತ್ತದೆ.

ಈ ಸ್ಮಾರ್ಟ್ ಲರ್ನಿಂಗ್ ತಂತ್ರಜ್ಞಾನವು ಬರೀ ವಿದ್ಯಾರ್ಥಿಗಳಿಗೆ ಮಾತ್ರ ಉಪಯೋಗವಲ್ಲ ಶಿಕ್ಷಕರು ಹಾಗೂ ಒಟ್ಟು ಮೊತ್ತ Govt ಶಾಲೆಗಳಿಗೂ ಬಹಳ ಬಹಳ ಉಪಯೋಗವಾಗುತ್ತದೆ.

ನಮಗೆ ಎಲ್ಲ ತಿಳಿದಿರುವ ಹಾಗೇ ಸರ್ಕಾರಿ ಶಾಲೆ ಎಂದರೆ ಶಿಕ್ಷಣವು ಬಹಳ ಕೆಟ್ಟದಾಗಿ ಇರುತ್ತದೆ ಎಂದು ಜನರ ಮನಸಲ್ಲಿ ಗಟ್ಟಿಯಾಗಿ ಉಳಿದುಬಿಟ್ಟಿವೆ, ಇದನ್ನು ಹೋಗಲಾಡಿಸಲು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲು Karnataka Government ಈ ತಂತ್ರಜ್ಞಾನವನ್ನು ಜಾರಿಗೊಳಿಸುವ ಯೋಜನೆಯನ್ನು ಬಲವಾಗಿ ನಿರ್ಧರಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಲರ್ನಿಂಗ್ ಯಾವಾಗ ನಿರೀಕ್ಷಿಸಬಹುದು?

ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಬಹಳ ಗಂಭೀರವಾಗಿ ಚರ್ಚೆಗೊಳಿಸುತ್ತಿದೆ, Karnataka ಒಟ್ಟು ಬರೋಬ್ಬರಿ 47000 ಕ್ಕೂ ಅಧಿಕ Govt ಶಾಲೆಗಳಿವೆ. ಈಗಾಗಿ ಸರ್ಕಾರವು ಈ ಸ್ಮಾರ್ಟ್ ಲರ್ನಿಂಗ್ ಜಾರಿಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಈ ತಂತ್ರಜ್ಞಾನವನ್ನು ಜಾರಿಗೊಳಿಸಲು ಕೇವಲ ಸಮಯಮಾತ್ರವಲ್ಲ ಬಂಡವಾಳ ಕೂಡ ದೊಡ್ಡ ಮಟ್ಟದಲ್ಲಿ ಸರ್ಕಾರವೂ ಹೂಡಿಕೆ ಮಾಡಬೇಕು. ಆದ್ದರಿಂದ ಸರ್ಕಾರವು ಸಮಯವನ್ನು ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯ.

47000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಇರುವುದರಿಂದ ಸ್ಮಾರ್ಟ್ ಲರ್ನಿಂಗ್ ಒಂದೇ ಸಮಯದಲ್ಲಿ ಎಲ್ಲಾ ಶಾಲೆಗಳಿಗೆ ಜಾರಿಗೊಳಿಸಲು ಬಹಳ ಕಷ್ಟ. ಆರಂಭದಲ್ಲಿ ಸರ್ಕಾರವು ಕೆಲವು ಪ್ರಮುಖ ಸರ್ಕಾರಿ ಶಾಲೆಗಳಿಗೆ ಮೊದಲು ಜಾರಿಗೊಳಿಸ ಬಹುದು, ಆನಂತರ ನಿಧಾನವಾಗಿ ಇನ್ನು ಉಳಿದ ಶಾಲೆಗಳಿಗೆ ಜಾರಿಗೊಳ್ಳುತ್ತವೆ.

ಈ ಸ್ಮಾರ್ಟ್ ಲರ್ನಿಂಗ್ ಕರ್ನಾಟಕ ಸರ್ಕಾರ ಶಾಲೆಗಳಿಗೆ ಬರುವವರೆಗೂ ವಿದ್ಯಾರ್ಥಿಗಳು ತಮ್ಮ ಪೋಷಕರ ಸ್ಮಾರ್ಟ್ ಫೋನ್ ಸಹಾಯದಿಂದ ಶಿಕ್ಷಣವನ್ನು ಮಾಡಬಹುದು. ಒಂದು ವೇಳೆ ಕೆಲ ವಿದ್ಯಾರ್ಥಿಗಳ ಪೋಷಕರ ಹತ್ತಿರ ಸ್ಮಾರ್ಟ್ ಫೋನ್ ಇಲ್ಲದ ಕಾರಣ ವಿದ್ಯಾರ್ಥಿಗಳು ಬಹಳ ಮುಖ್ಯವಾದ ಅಧ್ಯಾಯ ಅಥವಾ ಅರ್ಥವಾಗದ ಅಧ್ಯಾಯವನ್ನು ತಮ್ಮ ಸ್ನೇಹಿತರು ಅಥವಾ ಶಿಕ್ಷಕರ ಸಹಾಯದಿಂದ ಕಲಿಯಬಹುದು.

ಈಗೀನ ಕಾಲದಲ್ಲಿ ಸ್ಮಾರ್ಟ್ ತಂತ್ರಜ್ಞಾನವು ಎಷ್ಟು ಮುಖ್ಯವೋ ಅದರ ಜೋತೆಗೆ ನಮ್ಮ ಶ್ರಮವು ಕೂಡ ತುಂಬಾ ಮುಖ್ಯವಾಗುತ್ತದೆ ವಿದ್ಯಾಭ್ಯಾಸದ ಸಮಯದಲ್ಲಿ. ಯಾವುದೇ ಒಂದು ಕೆಲಸ ಕಾರ್ಯಗಳಾಗಲಿ ತಂತ್ರಜ್ಞಾನ ಜೋತೆಗೆ ನಮ್ಮ ಶ್ರಮ ಇಲ್ಲದೆ ಹೋದರೆ ನಮಗೆ ಫಲ ಕಡಿಮೆ ದೊರಕ್ಕುತ್ತದೆ.

ಹೆಚ್ಚು ಶ್ರಮ ಹೆಚ್ಚು ಫಲ ತಂದು ಕೊಡುತ್ತದೆ ಎಂಬ ಗಾದೆಯು ಎಂದಿಗೂ ಸುಳ್ಳಾಗುವುದಿಲ್ಲ. ಆಗಿನ ಕಾಲದಲ್ಲಿ ಅನೇಕ ವಿದ್ಯಾರ್ಥಿಗಳು ಯಾವುದೇ ತಂತ್ರಜ್ಞಾನವಿಲ್ಲದೆ ಜೀವನದಲ್ಲಿ ಹೆಚ್ಚು ಸಾಧನೆಯನ್ನು ಮಾಡಿದ್ದಾರೆ ಅದಲ್ಲದೆ ಅವರ ಶ್ರಮಕ್ಕೆ ತಕ್ಕ ಪ್ರತಿ ಫಲ ಅವರಿಗೆ ದೊರಕ್ಕಿದೆ.

ಸ್ಮಾರ್ಟ್ ಲರ್ನಿಂಗ್ ತಂತ್ರಜ್ಞಾನ ಜಾರಿಗೊಂಡರು ಸಹ ವಿದ್ಯಾರ್ಥಿಗಳು ಹೆಚ್ಚು ಶ್ರಮ ಪಟ್ಟು ವಿದ್ಯಾಭ್ಯಾಸ ಮಾಡುವುದರಿಂದ ಖಂದಿತ ವಾಗಿಯೂ ಇನ್ನು ಹೆಚ್ಚು ಅಂಕಗಳನ್ನು ಪರೀಕ್ಷೆಗಳಲ್ಲಿ ಪಡೆಯುವ ಸಾದ್ಯತ್ತೆ ಹೆಚ್ಚಿದೆ ಹಾಗೂ ಭವಿಷ್ಯದಲ್ಲಿ ಇನ್ನು ಹೆಚ್ಚು ಸಾಧನೆಯನ್ನು ಮಾಡುತ್ತಾರೆ.

(ಕರ್ನಾಟಕ ಸರ್ಕಾರದಿಂದ ಇಲ್ಲಿಯವರೆಗೂ ಸ್ಮಾರ್ಟ್ ಲರ್ನಿಂಗ್ ಯಾವ ದಿನಾಂಕ ದಂದು ಸರ್ಕಾರೀ ಶಾಲೆಗಳಿಗೆ ಜಾರಿಗೊಳ್ಳುತ್ತವೆ ಎಂಬ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ, ಹೆಚ್ಚಿನ ಮಾಹಿತಿಗಾಗಿ Kannada News Live ಗೆ follow ಮಾಡಿ).

Leave a Comment