ಕೆಲವು ತಿಂಗಳಿನಿಂದ ಸ್ಟಾಕ್ ಮಾರ್ಕೆಟ್ ಹೆಚ್ಚು ನೆಗೆಟಿವ್ ರಿಟರ್ನ್ಸ್ ಕೊಡುತ್ತಲೇ ಬಂದಿದೆ, ಇತ್ತೀಚೆಗೆ ಇನ್ವೆಸ್ಟರ್ಸ್ ಯಾರಾದರೂ ಸ್ಟಾಕ್ ಮಾರ್ಕೆಟ್ ನಲ್ಲಿ ಅಥವಾ ಮ್ಯೂಚುಯಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡಿದರೆ ಹೆಚ್ಚು ಪ್ರಾಫಿಟ್ ಗಿಂತ ಲಾಸ್ ಅನ್ನೇ ಅತ್ತಿ ಹೆಚ್ಚು ನೋಡಲು ಸಾಧ್ಯ.
ಸ್ಟಾಕ್ ಮಾರ್ಕೆಟ್ ನಲ್ಲಿ ಪ್ರಾಫಿಟ್ ಮತ್ತು ಲಾಸ್ ಅನ್ನು ನೋಡುವುದು ತುಂಬಾ ಕಾಮನ್, ಇತ್ತೀಚೆಗೆ ಬರೀ ಲಾಸ್ ಅನ್ನು ಮಾತ್ರ ಕಂಡ ಸ್ಟಾಕ್ ಮಾರ್ಕೆಟ್ ನ ಭವಿಷ್ಯ ಏನು ಎಂದು ಹೆಚ್ಚು ಇನ್ವೆಸ್ಟರ್ಸ್ ಭಯ ಪಟ್ಟಿದಾರೆ.
ಈ ಕಾರಣದಿಂದ ಅನೇಕ ಇನ್ವೆಸ್ಟರ್ಸ್ ಹೂಡಿಕೆ ಮಾಡಲು ಹಿಂಡಜರುಗಿದಾರೆ ಹಾಗೂ ಹೆಚ್ಚು ಇನ್ವೆಸ್ಟರ್ಸ್ ತಮ್ಮ ಇನ್ವೆಸ್ಟ್ಮೆಂಟ್ ಅನ್ನು ಲಾಸ್ ಅಲ್ಲಿಯೇ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ.
2025 ವರ್ಷದ ಪ್ರಾರಂಭದಲ್ಲಿ ಸ್ಟಾಕ್ಸ್ ಅನ್ನು ಮಾರಾಟ ಮಾಡುವುದು ಸರಿಯೇ?
ಇಲ್ಲ – ನೀವು ಏನಾದರು ಸ್ಟಾಕ್ ಮಾರ್ಕೆಟ್ ಅಥವಾ ಮ್ಯೂಚುಯಲ್ ಫಂಡ್ ಅಲ್ಲಿ ಮುಂಚೆಯೇ ಇನ್ವೆಸ್ಟ್ ಮಾಡಿದರೆ ನೀವು ಅತ್ತಿ ಹೆಚ್ಚು ಸಮಯ ವನ್ನು ಕೊಡುವುದು ಉತ್ತಮ, ಏಕೆಂದರೆ 2025 ವರ್ಷದ ಮಧ್ಯ ಅಥವಾ ವರ್ಷದ ಕೊನೆ ಸೆನ್ಸೆಕ್ಸ್ ಅತ್ತಿ ಹೆಚ್ಚು ಪ್ರಾಫಿಟ್ ಕೊಡುವ ಸಾಧ್ಯತೆ ಹೆಚ್ಚಿದೆ.
ನೀವೇನಾದರೂ ಹೊಸದಾಗಿ ಇನ್ವೆಸ್ಟ್ಮೆಂಟ್ ಮಾಡಲು ನಿರ್ಧರಿಸಿದರೆ 2025 ವರ್ಷದ ಪ್ರಾರಂಭ ಒಳ್ಳೆ ಸಮಯ ಎಂದು ಫೈನಾನ್ಸಿಯಲ್ ಎಸ್ಪಿಎರ್ಟ್ಸ್ ಸೂಚಿಸುತ್ತಾರೆ.
2025 ಮುಗಿಯುವ ಅಷ್ಟರಲ್ಲಿ Sensex 1 ಲಕ್ಷ ದಾಟುತ್ತ?
ತುಂಬಾ ಇನ್ವೆಸ್ಟರ್ಸ್ ತಲೆಯಲ್ಲಿ ಓಡುವ ಒಂದು ಪ್ರಶ್ನೆ ಸೆನ್ಸೆಕ್ಸ್ ಮೇಲೆ ಹೋಗುವ ಸಾಧ್ಯತೆ ಇದೆಯಾ ಅಥವಾ ಇನ್ನು ಡೌನ್ ಫಾಲ್ ಹಾಗುತ್ತಾ.
ಹೀಗಾಗಲೇ ಅನೈಕ ಫೈನಾನ್ಸಿಯಲ್ ಎಸ್ಪಿಎರ್ಟ್ಸ್ ಮಾಡಿರುವ ಸಂಶೋಧನೆ ಪ್ರಕಾರ ಇನ್ನು ಕೆಲವು ದಿನಗಳು ಸೆನ್ಸೆಕ್ಸ್ ಕುಸಿಯಲು ಸಾಧ್ಯತೆ ಇದೆ. ಆನಂತರ ಸೆನ್ಸೆಕ್ಸ್ ಮೇಲೆ ಹೋಗಲು ಹೆಚ್ಚು ಸಾಧ್ಯತೆ ಇದೆ ಎಂದು ಫೈನಾನ್ಸಿಯಲ್ ಸಂಶೋಧಕರು ಹೇಳಿಕೆಯನ್ನು ಕೊಟ್ಟಿದಾರೆ.
ಒಂದು ವೇಳೆ ಸೆನ್ಸೆಕ್ಸ್ ಮೇಲೆ ಹೋಗುತ್ತೆ ಎಂದರೆ ಎಷ್ಟು ಹೋಗಬಹುದು?
ಫೈನಾನ್ಸಿಯಲ್ ಸಂಶೋಧಕರ ಮಾಹಿತಿಯ ಪ್ರಕಾರ 2025 ವರ್ಷ ಮುಗಿಯುವ ಅಷ್ಟರಲ್ಲಿ ಸೆನ್ಸೆಕ್ಸ್ 1 ಲಕ್ಷ ದಾಟುತ್ತೆ ಎಂದು ಊಹಿಸಿದಾರೆ. ಆದ್ದರೆ ಅದು ಎಷ್ಟು ಸತ್ಯ ಎಂದು ನಾವು ಜೂಲೈ ತಿಂಗಳ ನಂತರ ಊಹಿಸಬಹುದು.
2024 ಸೆಪ್ಟೆಂಬರ್ ತಿಂಗಳಿನಲ್ಲಿ ಸೆನ್ಸೆಕ್ಸ್ ಸುಮಾರು 85,836 ಪಾಯಿಂಟ್ಸ್ ಮೇಲೆ ಹೋಗಿತ್ತು. ಅನಂತರ ನಿಧಾನವಾಗಿ ಸೆನ್ಸೆಕ್ಸ್ ಕುಸಿಯಲು ಪ್ರಾರಂಭ ತೊಡಗಿತ್ತು. ಸದ್ಯಕ್ಕೆ ಸೆನ್ಸೆಕ್ಸ್ 76000 ಪಾಯಿಂಟ್ಸ್ ಅಷ್ಟು ಕೆಳಗೆ ಬಂದಿದೆ, ಇದು ಇನ್ನು ಕುಸಿಯಲು ಸಾಧ್ಯತೆ ಇರಬಹುದು ಇನ್ನು ಮುಂದ್ ಬರುವ ದಿನಗಳಲ್ಲಿ.
ಹೊಸದಾಗಿ ಹೂಡಿಕೆ ಮಾಡುವ ಇನ್ವೆಸ್ಟರ್ಸ್ ಗಳಿಗೆ ಇದೊಂದು ಒಳ್ಳೆಯ ಅವಕಾಶ ಏಕೆಂದರೆ ಹಿಂದಿನ ವರ್ಷ ಗಿಂತ ಈ ವರ್ಷ (2025) ಸ್ಟಾಕ್ಸ್ ಗಳು ಅತೀ ಹೆಚ್ಚು ಕಡಿಮೆ ಬೆಲೆಗೆ ಹೂಡಿಕೆ ಮಾಡಬಹುದು.
ಉಧಾರಣೆಗೆ ನೀವೇನಾದರೂ 2025 ಪ್ರಾರಂಭದಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ನೀವು 200 ರೂಪಾಯಿ ಬೆಳೆಯ ಸ್ಟಾಕ್ ಅನ್ನು 100 ರೂಪಾಯಿ ಕೊಟ್ಟು ಖರೀದಿ ಮಾಡಬಹುದು, ಅದೇ ಸ್ಟಾಕ್ ಅನ್ನು ನೀವೇನಾದರೂ ಹಿಂದಿನ ವರ್ಷದಲ್ಲಿ (2024) ಹೂಡಿಕೆ ಮಾಡಿದಲ್ಲಿ ನೀವು 200 ರೂಪಾಯಿ ಕೊಟ್ಟು ಖರೀದಿ ಮಾಡುವಂತಾಗಿತ್ತು.
ಕಳೆದ ೫ ವರ್ಷಗಲ್ಲಿಂದ ಸ್ಟಾಕ್ ಮಾರ್ಕೆಟ್ ಅಥವಾ ಸೆನ್ಸೆಕ್ಸ್ ಡೇಟಾ ವನ್ನು ನೋಡಿದರೆ ಇನ್ವೆಸ್ಟರ್ಸ್ ಗಳಿಗೆ ಹೆಚ್ಚು ಲಾಭವನ್ನು ತಂದು ಕೊಟ್ಟಿದೆ. ಅತೀ ಹೆಚ್ಚು ರಿಟರ್ನ್ಸ್ ಗಳನ್ನೂ ತಂದು ಕೊಟ್ಟ ಸೆನ್ಸೆಕ್ಸ್ ಇದೀಗ ಕುಸಿಯಲು ಪ್ರಾರಂಭ ತೊಡಗಿದೆ.
ಸ್ಟಾಕ್ ಮಾರ್ಕೆಟ್ ಹೆಚ್ಚು ಮೇಲ್ ಹೋದಷ್ಟು ಕೆಳಗೆ ಇಳಿಯಲೇ ಬೇಕು ಏಕೆಂದರೆ ಅದೇ ಸ್ಟಾಕ್ ಮಾರ್ಕೆಟಿನ ವಿಶೇಷತೆ.
ಸೆನ್ಸೆಕ್ಸ್ ಡೇಟಾ ಪ್ರಕಾರ ಅತೀ ಹೆಚ್ಚು ವರ್ಷಗಳು ಹೂಡಿಕೆ ಮಾಡಿದ ಇನ್ವೆಸ್ಟರ್ಸ್ ಗಳಿಗೆ ಯಾವುದೇ ರೀತಿಯ ನೆಗೆಟಿವ್ ರಿಟರ್ನ್ಸ್ ಗಳನ್ನು ತಂದು ಕೊಟ್ಟಿಲ್ಲ.
ನೀವೇನಾದರೂ ಲಾಂಗ್ ಟರ್ಮ್ ಇನ್ವೆಸ್ಟರ್ ಆಗಿ ಸ್ಟಾಕ್ ಮಾರ್ಕೆಟ್ ಅಥವಾ ಮ್ಯೂಚುಯಲ್ ಫಂಡ್ ನಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುತ್ತ ಬರುತ್ತಿದ್ದರೆ ನೀವು ಈ ಮಾರ್ಕೆಟ್ ಡೌನ್ ಫಾಲ್ ಕುರಿತ್ತು ಹೆಚ್ಚು ತಲೆ ಕೆಡಿಸಿ ಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಭಾರತ ದೇಶದ ಎಕಾನಮಿ ಕಂಡಿತಲೂ ಬೆಳೆಯುತ್ತದೆ, ಹಾಗೂ ಇನ್ವೆಸ್ಟರ್ಸ್ ಗಳಿಗೆ ಭವಿಷ್ಯದಲ್ಲಿ ಹೆಚ್ಚು ಲಾಭವನ್ನು ತಂದು ಕೊಡುತ್ತದೆ.